Participated and conveyed best wishes at the Kodava Families' Muddanda Cup 2025 hockey tournament being held at Field Marshal K.M. Cariappa Ground, 27/04/2025
ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ಮುದ್ದಂಡ ಕಪ್ 2025 ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾ ಕೂಟಕ್ಕೆ ಶುಭ ಕೋರಿದ ಸಂದರ್ಭ.

Hon'ble Ministers Visit Madikeri to Pay Respects to Late Mittu Changappa’s Family, 27/04/2025
ಇಂದು ಕೊಡಗು ಜಿಲ್ಲೆಗೆ ಆಗಮಿಸಿದ ಮಾನ್ಯ ಗೃಹ ಸಚಿವರಾದ ಡಾ ಜಿ ಪರಮೇಶ್ವರ್,ಸಚಿವರುಗಳಾದ ಶ್ರೀ ದಿನೇಶ್ ಗುಂಡೂರಾವ್, ಶ್ರೀ ಬೈರತಿ ಸುರೇಶ್, ಶ್ರೀ ಎಂ ಸಿ ಸುಧಾಕರ ರವರೊಂದಿಗೆ ಮಡಿಕೇರಿಯಲ್ಲಿರುವ ದಿವಂಗತ ಮಿಟ್ಟು ಚಂಗಪ್ಪರವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ.

Took the final darshan and offered prayers for the soul after viewing the mortal remains of our nation's pride, renowned scientist, former ISRO chairman, and Padma Vibhushan awardee Dr. K. Kasturirangan in Bengaluru, 27/04/2025
ನಮ್ಮ ದೇಶದ ಹೆಮ್ಮೆ ಸುಪ್ರಸಿದ್ಧ ವಿಜ್ಞಾನಿ,ಇಸ್ರೋದ ಮಾಜಿ ಅಧ್ಯಕ್ಷರು, ಪದ್ಮವಿಭೂಷಣ ಡಾ. ಕೆ.ಕಸ್ತೂರಿ ರಂಗನ್ ರವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಬೆಂಗಳೂರಿನಲ್ಲಿ ಪಡೆದು ಗೌರವ ನಮನಗಳನ್ನು ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದೆ.

Participated and conveyed best wishes in the final match of the Muddanda Hockey Sports Meet, 27/04/2025
ಮುದ್ದಂಡ ಹಾಕಿ ಕ್ರೀಡಾ ಕೂಟದ ಫೈನಲ್ ಪಂದ್ಯದಲ್ಲಿ ಭಾಗವಹಿಸಿ ಶುಭ ಕೋರಿದೆ.

Groundbreaking Ceremony for New Road Projects at Gandhadagudi Colony, Balele, 26/04/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ,ಪೊನ್ನಂಪೇಟೆ ತಾಲೂಕು ಬಾಳೆಲೆ ಗ್ರಾಮ ಪಂಚಾಯತಿಯ ಗಂಧದಗುಡಿ ಪರಿಶಿಷ್ಟ ಜನಾಂಗದವರ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಲು ಯೋಜಿಸಿರುವ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶುಭಸಂದರ್ಭ. #ASPonnanna
