An Enlightening Experience at the Centenary Commemorative Lecture by Justice Venkataramiah, 22/12/2024
ಇಂದು ನ್ಯಾಯಮೂರ್ತಿ ವೆಂಕಟರಾಮಯ್ಯ ಶತಮಾನೋತ್ಸವದ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಕಾನೂನು ವಿದ್ಯಾರ್ಥಿಯಾದ ನನಗೆ ಅತ್ಯದ್ಭುತವಾದ ಉಪನ್ಯಾಸ ಕೇಳಿ ಪ್ರಜ್ಞಾಶಾಲಿಯಾಗಲು ಅವಕಾಶವಾಯಿತು.
ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀಮತಿ ಬಿ.ವಿ. ನಾಗರತ್ನ ಅವರು,ಶ್ರೀ ಪಿ.ಎಸ್ ನರಸಿಂಹ ಅವರು, ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು, ನಿವೃತ್ತ ನ್ಯಾಯಮೂರ್ತಿಗಳು, ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಕಾನೂನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

The moment I attended a preliminary meeting led by Hon. CM Siddaramaiah on the occasion of the historic centenary celebrations of the Congress Party to be held in Belgaum on Dec 26th and 27th, 22/12/2024
ಇದೆ ಡಿಸೆಂಬರ್ 26, 27ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಐತಿಹಾಸಿಕ ಶತಮಾನೋತ್ಸವ ಆಚರಣೆಯ ಪ್ರಯುಕ್ತ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಕ್ಷಣ.

During the Belagavi session, attention was drawn in the assembly to the pressing issues of the Virajpet constituency and Kodagu district, 19/12/2024
ಬೆಳಗಾವಿ ಅಧಿವೇಶನದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಗೂ ಕೊಡಗು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದ ಗಮನ ಸೆಳೆದ ಸಂದರ್ಭ.

Respectful tributes on the death anniversary of the great military leader, Padma Bhushan awardee General K.S. Thimayya, who led the Indian Army with distinction, 18/12/2024
ಭಾರತೀಯ ಸೇನೆಯನ್ನು ಮುನ್ನಡೆಸಿದ ಶ್ರೇಷ್ಠ ಸೇನಾಧಿಕಾರಿ, ಪದ್ಮಭೂಷಣ ಪುರಸ್ಕೃತರಾದ ಜನರಲ್ ಕೆ.ಎಸ್. ತಿಮ್ಮಯ್ಯ ರವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ಪ್ರಣಾಮಗಳು.

A meeting was held with the Minister of School Education and Literacy, Shri Madhu Bangarappa, and senior officials of the department regarding the infrastructure and demands of Kodagu district government-aided and private schools and colleges., 17/12/2024
ಕೊಡಗು ಜಿಲ್ಲಾ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಮೂಲಸೌಕರ್ಯ ಮತ್ತು ಬೇಡಿಕೆಗಳ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವರಾದ ಶ್ರೀ ಮಧು ಬಂಗಾರಪ್ಪ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.ಹಾಗೂ ರಾಜ್ಯದ ಶಾಲಾ ಕಾಲೇಜುಗಳಲ್ಲಿ ‘ಕೊಡವ’ ಜಾತಿ ಎಂದು ನಮೂದಿಸಿ ಸರಕಾರದ ಅಧಿಸೂಚನೆ ಹೊರಡಿಸಲಾಗಿದೆ.
