Visit to Bhadrakali Temple in Parane, 31/12/2022
Visit to Bhadrakali Temple in Parane. ಪಾರಣೆಯ ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ
ಪಾರಾಣೆ ಕೋಣಂಜಿಗೇರಿ ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಅತಿ ಅದ್ಭುತವಾದ ಅನುಭವ ಪಡೆದೆ. ಬಹಳ ಪ್ರೀತಿಯಿಂದ ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು ಗ್ರಾಮಸ್ಥರು ನನ್ನನ್ನು ಬರಮಾಡಿಕೊಂಡರು. ದೇವರ ದರ್ಶನ ಪಡೆದು ಸಕಲ ಜನರ ಹಿತಕ್ಕಾಗಿ ಪ್ರಾರ್ಥಿಸಿದೆ.
ಈ ದೇವಸ್ಥಾನಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಇದೆ. 1946ರಲ್ಲಿ ಕಲ್ಲಿನ ಗೋಡೆ ಹುಲ್ಲಿನ ಚಾವಣಿಯ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಹಂಚಿನ ಚಾವಣಿಗೆ ಬದಲಾಯಿಸಲಾಯಿತು. 2020ರ ಏಪ್ರಿಲ್ ನಿಂದ ಆರಂಭಿಸಿ ದೇವಸ್ಥಾನವನ್ನು ಪೂರ್ತಿಯಾಗಿ ಕೆಡವಿ ಕಾರ್ಕಳದ ಕಲ್ಲಿನಿಂದ ಗಣಪತಿ ಗುಡಿ ಗರ್ಭಗುಡಿ ತೀರ್ಥ ಮಂಟಪ ಮತ್ತು ಚಾಮುಂಡಿ ದೇವಸ್ಥಾನವನ್ನು ಮತ್ತು ದೇವಸ್ಥಾನದ ಸುತ್ತಲೂ ಹಂಚು ಹಾಕಿದ ಪೌಳಿಯನ್ನು ಅಂದಾಜು ರೂ. 1. 70 ಕೋಟಿ ವೆಚ್ಚದಲ್ಲಿ ಊರಿನವರ ಹಾಗೂ ಸಾರ್ವಜನಿಕರ ಮತ್ತು ದಾನಿಗಳ ಸಹಕಾರದಿಂದ ಪುನಃ ನಿರ್ಮಾಣಗೊಳಿಸಲಾಗಿ. ದಿನಾಂಕ 25.12.22 ರಿಂದ 30.12 .22ರವರೆಗೆ ಪ್ರತಿಷ್ಟಾಪನೆಯನ್ನು ನಡೆಸಲಾಗಿದೆ. ಈ ದೇವಸ್ಥಾನದ ಅಧ್ಯಕ್ಷರಾಗಿ ಶ್ರೀ ಎಂ ಜೆ ಕುಮಾರ್ ನಾಣಯ್ಯ ಅವರು ಕಾರ್ಯನಿರ್ವಹಿಸುತ್ತಿರುತ್ತಾರೆ.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong

Visit to Chamundeshwari Temple in Mythadi, 28/12/2022
Visit to Chamundeshwari Temple in Mythadi. ಮೈತಾಡಿಯ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ
ವಿರಾಜಪೇಟೆಯ ಮೈತಾಡಿ ಗ್ರಾಮದಲ್ಲಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದೆ. ಇದೇ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಗ್ರಾಮದ ಹಿರಿಯರು ಮತ್ತು ಸ್ಥಳೀಯರೊಂದಿಗೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದೆ. ನನ್ನ ಕೈಲಾದ ನೆರವನ್ನು ಒದಗಿಸಿದ್ದೇನೆ. ದೇವರ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಪ್ರಾರ್ಥಿಸುತ್ತೇನೆ.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong

Kiggatnad Cricket Festival, 27/12/2022
Kiggatnad Cricket Festival. ಕಿಗ್ಗಟ್ ನಾಡ್ ಕ್ರಿಕೆಟ್ ಫೆಸ್ಟಿವಲ್
ಕೊಡಗಿನ ಭಾಷೆ, ಸಂಸ್ಕೃತಿಯನ್ನು ಕೂಡ ಕ್ರೀಡೆ ಬೆಸೆಯುತ್ತದೆ ಎನ್ನುವುದಕ್ಕೆ ಕಿಗ್ಗಟ್ ನಾಡ್ ಕ್ರಿಕೆಟ್ ಫೆಸ್ಟಿವಲ್ ಸಾಕ್ಷಿ. ಕ್ರೀಡೆಯ ಮೂಲಕ ನಮ್ಮ ಪರಂಪರೆಯನ್ನು ನೆನೆಪಿಸುವ ಕೆಲಸ ಮಾಡುತ್ತಿರುವ ಇದರ ಆಯೋಜಕರಿಗೆ ನನ್ನ ಅಭಿನಂದನೆಗಳು.
ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ, ಕ್ರೀಡಾಪಟುಗಳನ್ನು ಉದ್ದೇಶಿಸಿ ಪ್ರೋತ್ಸಾಹದ ಮಾತುಗಳನ್ನು ಹೇಳಿದೆ. ಇದೇ ಸಂದರ್ಭದಲ್ಲಿ ನನ್ನನು ಸನ್ಮಾನಿಸಿದ ಆಯೋಜಕರಿಗೆ ನನ್ನ ಧನ್ಯವಾದಗಳು.
ಕ್ರೀಡೆ ಕೇವಲ ಮನೋರಂಜನೆಯ ಸಾಧನವಲ್ಲ. ಇದು ಸಮಾಜದಲ್ಲಿ ಜನರನ್ನು ಒಗ್ಗೂಡಿಸುವ, ಬದುಕನ್ನು ಕಟ್ಟಲು ಕ್ರೀಡಾಮನೋಭಾವ ತುಂಬುವ ಒಂದು ಸಾಧನ ಕೂಡ. ಕೊಡಗಿನ ಜನರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಅವರು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದು ಒಂದು ಮುಖ್ಯ ಕಾರಣ. ಈ ಪಂದ್ಯಾವಳಿಯ ಆಯೋಜಕರಿಗೂ, ಪಾಲ್ಗೊಂಡ ಕ್ರೀಡಾಪಟುಗಳಿಗೂ ಮತ್ತೊಮ್ಮೆ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Cricket #KiggatNad #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong

Kabaddi tournament in Siddapura, 26/12/2022
Kabaddi tournament in Siddapura. ಸಿದ್ದಾಪುರದಲ್ಲಿ ಕಬಡ್ಡಿ ಪಂದ್ಯಾವಳಿ
67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜೈ ಭೀಮ್, ಸಿದ್ದಾಪುರ, ಇವರು ಆಯೋಜಿಸಿದ್ದ ಮೂರನೇ ವರ್ಷದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ, ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದೆ.
ನಮ್ಮ ಭಾರತೀಯ ಸಂಸ್ಕೃತಿ, ಸಮಾಜ ಹಾಗೂ ಸಂವಿಧಾನ ಕೂಡ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ. ಅದರಲ್ಲೂ ಕ್ರೀಡೆಗೆ ಜಾತಿ, ಮತ, ವರ್ಗಗಳನ್ನು ಒಗ್ಗೂಡಿಸುವ ಶಕ್ತಿ ಇದೆ. ಎಲ್ಲರೂ ಸೇರಿ ಸಂಭ್ರಮಿಸುವ, ಎಲ್ಲರೂ ಕೂಡಿ ಕ್ರೀಡಾಮನೋಭಾವದಿಂದ ಪಾಲ್ಗೊಳ್ಳುವ ಪಂದ್ಯಾವಳಿಗಳನ್ನು ಆಯೋಜಿಸುವುದು ನಮ್ಮ ಸಂಸ್ಕೃತಿ ಮತ್ತು ಸಂವಿಧಾನದ ಆಶೋತ್ತರಗಳನ್ನು ಮುನ್ನಡೆಸುವ ಕೆಲಸವೇ ಆಗಿದೆ.
ಪಂದ್ಯಾವಳಿಯ ಆಯೋಜಕರಿಗೂ, ಕ್ರೀಡಾಪಟುಗಳಿಗೂ ನನ್ನ ಅಭಿನಂದನೆಗಳು. ಮುಂಬರುವ ವರ್ಷಗಳಲ್ಲಿ ಈ ಪಂದ್ಯಾವಳಿ ಇನ್ನಷ್ಟು ಬೆಳೆಯಲಿ ಎಂದು ಹಾರೈಸುತ್ತೇನೆ.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong

Merry Christmas to all, 25/12/2022
Merry Christmas to all. ಕ್ರಿಸ್ಮಸ್ ಹಬ್ಬದ ಶುಭಾಶಯಗಳು
ಎಲ್ಲರಿಗೂ ಸಹಬಾಳ್ವೆಯ ಸಂಕೇತವಾದ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಎಲ್ಲಾ ಜನರ ಒಳಿತಿಗೆ, ಎಲ್ಲಾ ಜನರ ಏಳಿಗೆಗೆ ಹಬ್ಬವು ಮುನ್ನುಡಿಯಾಗಲಿ. ಸಕಲ ಕ್ರಿಶ್ಚಿಯನ್ ಬಾಂಧವರಿಗೆ ಸುಭಾಷಯಗಳು.
#MerryChristmas #Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Hundi #Kaveri #Talacauvery #Hudikeri #Napoklu #Birunani #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
