Visit to Sri Kadapalappa Swamy temple in Cherambane, 25/08/2022
ಚೇರಂಬಾಣೆ ಬಳಿಯ ಶ್ರೀ ಕಡಪಾಲಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ. ದೇವರಲ್ಲಿ ಸಮಸ್ತ ಜನತೆಯ ಕ್ಷೇಮಕ್ಕೆ ಪ್ರಾರ್ಥಿಸಿದೆ.
ಸುಂದರ ಪರಿಸರದಲ್ಲಿ ನೆಲೆ ನಿಂತಿರುವ ಸ್ವಾಮಿಯ ದರ್ಶನ ಪಡೆದಿದ್ದು ನನ್ನ ಸೌಭಾಗ್ಯ.
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Temple #Cherambane

Inspection of the poorly constructed flyover at Bhagamandala, 23/08/2022
ಕೆಲ ದಿನಗಳ ಹಿಂದೆ ಭಾಗಮಂಡಲದಲ್ಲಿ ತೀರ ಕಳಪೆ ಕಾಮಗಾರಿ ಉಪಯೋಗಿಸಿ ಮೇಲ್ಸೇತುವೆ ನಿರ್ಮಾಣ ಮಾಡಿರುವ ವಿಚಾರ ತಿಳಿದು ಅದನ್ನು ಪರಿಶೀಲಿಸಿದೆ. ಜಿಲ್ಲೆಯ ಜನರ ಹಿತಕ್ಕಿಂತ 40% ಕಮಿಷನ್ ತಿನ್ನುವುದೇ ಉದ್ದೇಶವಾಗಿರುವುದರಿಂದ ಈ ರೀತಿಯ ಕಾಮಗಾರಿ ನಡೆದಿದೆ.
ಆಡಳಿತ ಮಾಡುತ್ತಿರುವವರ ಸ್ವ-ಹಿತಾಸಕ್ತಿ ಎಲ್ಲೆಲ್ಲೂ ಜನರ ಬದುಕಿಗೆ ತೊಂದರೆ ಕೊಡುತ್ತಿದೆ. ಮೇಲ್ಸೇತುವೆ ಕಾಮಗಾರಿ ಒಂದೇ ಅಲ್ಲ. ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿಯುವ ಎಲ್ಲಾ ಸರ್ಕಾರಿ ಕೆಲಸಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.
ಇದರ ಜೊತೆಗೆ ಜಿಲ್ಲೆಗೆ ಮಲತಾಯಿ ಧೋರಣೆ ತೋರಿಸಿ ಮಳೆ ಮತ್ತು ಪ್ರವಾಹದಿಂದ ತೊಂದರೆಯಾದವರಿಗೆ ಪರಿಹಾರ ಕೊಡುವುದಕ್ಕು ಸರ್ಕಾರ ಮುಂದಾಗುತ್ತಿಲ್ಲ. ಇದನ್ನು ಕೇಳಲು ಇಲ್ಲಿನ ಶಾಸಕರಿಗೆ ಬಾಯಿಲ್ಲ. ಕೊಡಗಿಗೆ ಇವರಿಂದ ಮುಕ್ತಿ ಕೊಡಿಸಬೇಕಿದೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Floods #Rains #Landslides #Bhagamandala #Flyover

Police involved in attack on Siddaramaiah, 20/08/2022
ವಿಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನಡೆದಿರುವ ಹಲ್ಲೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿಯ ಬೆಂಬಲವೂ ಇದೆ. ಹಲ್ಲೆಗೆ ಪೊಲೀಸರ ಕರ್ತವ್ಯ ಲೋಪ ಕಾರಣ. ಸಿದ್ದರಾಮಯ್ಯ ಅವರ ಮೇಲೆ ಹಲ್ಲೆ ಮಾಡಿದವರು ಪೊಲೀಸರ ಮೇಲು ಹಲ್ಲೆ ಮಾಡಿದ್ದಾರೆ ಮತ್ತು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ನಿಷ್ಪಕ್ಷಪಾತವಾಗಿ ಪೊಲೀಸರು ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದೇನೆ.
ಅಂಗೈ ಉಣ್ಣಿಗೆ ಕನ್ನಡಿ ಕೇಳುವಂತೆ ಪೊಲೀಸರು ದೂರು ಕೇಳುತ್ತಿದ್ದಾರೆ. ಅವರ ಕಣ್ಣ ಮುಂದೆ ನಡೆದ ಘಟನೆಗೆ ಅವರೇ ಜವಾಬ್ದಾರರು.
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery

Siddaramaiah's important visit to Kodagu to assess flood relief by district administration, 19/08/2022
ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದ ನಮ್ಮ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾನ್ಯ ಜನರು ಕೋರಿದ ಸ್ವಾಗತ ನಮ್ಮ ವಿರೋಧಿ ಪಕ್ಷದವರಿಗೆ ನುಂಗಲಾಗದ ತುತ್ತಾಗಿದೆ.
ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಸ್ಥಳೀಯ ಮುಖಂಡರು ಅದ್ದೂರಿಯಾಗಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು. ಅವರು ಭೇಟಿ ಕೊಟ್ಟ ಪ್ರತಿ ಪ್ರದೇಶದಲ್ಲೂ ಜನರು ಅವರಿಗೆ ಕೊಟ್ಟ ಪ್ರೀತಿಯ ಸ್ವಾಗತ ನಮ್ಮ ವಿರೋಧಿಗಳ ನಿದ್ದೆ ಕೆಡಿಸಿರುವುದು ಸ್ಪಷ್ಟ.
ಸಿದ್ದರಾಮಯ್ಯ ಅವರ ಜೊತೆ ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಕೊಟ್ಟು ಸರ್ಕಾರದ ಕಡೆಯಿಂದ ಪರಿಹಾರ ಕಾರ್ಯಗಳ ಕೊರತೆ ಬಗ್ಗೆ ಅವರಿಗೆ ವಿವರಿಸಿದೆ. ಹಲವಾರು ಕಡೆ ಜನರನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿ ಅವರಲ್ಲಿ ವಿಶ್ವಾಸ ಮೂಡಿಸಿದರು.
ಈ ಭೇಟಿಯ ಸಂಧರ್ಭದಲ್ಲಿ ಒಂದು ಕಡೆ ಸಿದ್ದರಾಮಯ್ಯ ಅವರ ಕಾರಿನ ಮೇಲೆ ದಾಳಿ ಮಾಡಿರುವ ಕೃತ್ಯ ಅತ್ಯಂತ ಹೇಯವಾದದ್ದು. ಪಕ್ಷ ರಾಜಕೀಯ ಹೊರತಾಗಿಯೂ ನಾಗರೀಕ ಸಮಾಜ ತಲೆ ತಗ್ಗಿಸುವಂತ ಕೆಲಸ ಇದು.
ಸರ್ಕಾರ ಮಾಡಬೇಕಾದ ಕೆಲಸವನ್ನು ಬಿಟ್ಟು ತನ್ನ ನ್ಯೂನ್ಯತೆಗಳನ್ನು ಮುಚ್ಚಿಕೊಳ್ಳಲು ತನ್ನ ಕಾರ್ಯಕರ್ತರಿಂದ ಈ ರೀತಿಯ ಕೆಲಸ ಮಾಡಿಸುತ್ತಿದೆ. ಈ ದಾಳಿಗೆ ಕಾರಣರಾದ ಜನರನ್ನು ಗುರುತಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಇದು ಸರ್ಕಾರಕ್ಕೆ ನಮ್ಮ ಕೋರಿಕೆ ಮಾತ್ರವಲ್ಲ ಎಚ್ಚರಿಕೆ.
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Floods #Rains

Scholarship for girl students of Kodagu, in 2022, 18/08/2022
ಎ.ಕೆ.ಸುಬ್ಬಯ್ಯ - ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಒದಗಿಸುವುದು ಒಂದಾಗಿದೆ. ಇದಕ್ಕೆ ಕಳೆದ ವರ್ಷವೇ ಚಾಲನೆ ಸಿಕ್ಕಿದೆ.
ಈ ವರ್ಷವೂ ಕೂಡ ಶಕ್ತಿ ದಿನಪತ್ರಿಕೆ ಹಾಗೂ ಇ-ವಿದ್ಯಾ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಮೊದಲ ವರ್ಷದ ಡಿಗ್ರಿ ಪದವಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರು ಆರ್ಜಿ ಹಾಕಬಹುದು.
ಆರ್ಥಿಕವಾಗಿ ದುರ್ಬಲ ಹಿನ್ನೆಲೆಯಿಂದ ಬಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾಲ, ವರ್ಷಕ್ಕೆ ತಲಾ ರೂ.10,000 ವಿದ್ಯಾರ್ಥಿ ವೇತನ ಕೊಡಲಾಗುವುದು.
ನಿಮ್ಮ ಅರ್ಜಿಯೊಂದಿಗೆ ಕುಟುಂಬದ ಆದಾಯ ಪ್ರಮಾಣಪತ್ರ, ಎರಡನೇ ಪಿ.ಯು. ಅಂಕಪಟ್ಟಿ ಮತ್ತು ಈಗ ಸೇರಿರುವ ಕಾಲೇಜಿನ ವಿವರಗಳನ್ನು ತಪ್ಪದೆ ಲಗತ್ತಿಸಿ.
ಇದೇ ತಿಂಗಳ 23ರ ಒಳಗೆ ಅರ್ಜಿಗಳನ್ನು Shakthidaily@gmail.com ಕ್ಕೆ, ಅಥವಾ ಅಂಚೆ ಮೂಲಕ ವ್ಯವಸ್ಥಾಪಕರು, ಶಕ್ತಿ ದಿನಪತ್ರಿಕೆ, ಇಂಡಸ್ಟ್ರಿಯಲ್ ಟೌನ್, ಮಡಿಕೇರಿ, ಇಲ್ಲಿಗೆ ಕಳುಹಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ 26ನೇ ತಾರೀಕು ತಿಳಿಸಲಾಗುವುದು. 27ನೇ ತಾರೀಕು ವಿದ್ಯಾರ್ಥಿವೇತವ ವಿತರಿಸುವ ಕಾರ್ಯಕ್ರಮವಿರುತ್ತದೆ.
ಇಂತಿ
ಎ. ಎಸ್.ಪೊನ್ನಣ್ಣ
ವ್ಯವಸ್ಥಾಪಕ ಟ್ರಸ್ಟೀ
ಎ.ಕೆ.ಸುಬ್ಬಯ್ಯ - ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery
ಎ. ಎಸ್.ಪೊನ್ನಣ್ಣ
ವ್ಯವಸ್ಥಾಪಕ ಟ್ರಸ್ಟೀ
ಎ.ಕೆ.ಸುಬ್ಬಯ್ಯ - ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್
