Program on BTV, 13/08/2022
#law #lawyer #karnatakalawyer #kodava #kodagu #virajpet
He raised me to be a strong man, 09/08/2022
ನನ್ನ ತಂದೆಯವರಾದ ಎ ಕೆ ಸುಬ್ಬಯ್ಯ ಅವರು ಈ ರಾಜ್ಯ ಕಂಡ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿ. ಒಬ್ಬ ತಂದೆಯಾಗಿ ಅವರು ನನ್ನನ್ನು ಸ್ವಂತವಾಗಿ ಆಲೋಚನೆ ಮಾಡಲು ಮತ್ತು ಸ್ವ-ಇಚ್ಛೆಯಿಂದ ಹೆಜ್ಜೆ ಇಡುವಂತೆ ಬೆಳೆಸಿದ್ದಾರೆ. ಸ್ವಾಭಾವಿಕವಾಗಿ ಅವರ ಈ ಗುಣಗಳು ನನ್ನಲೂ ಇದೆ.
ಶಿಕ್ಷಣದ ಮಹತ್ವ, ಜನರೊಂದಿಗೆ ಬೆರೆಯುವ ತವಕ, ಸಮಾಜಮುಖಿಯಾಗಿ ಆಲೋಚನೆ ಮಾಡುವ ಹಂಬಲ, ಜನರ ಬಗ್ಗೆ ಇಡಬೇಕಾದ ಕಾಳಜಿ, ಎಲ್ಲವನ್ನು ನಾನು ಅವರಿಂದ ಕಲಿತೆ.
ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ಣ ಪ್ರೀತಿಯ ನಮನಗಳು.
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #AKSubbaiah


Hearty congratulations to all sportspersons making India proud at the #CWG2022, 08/08/2022
ಕಾಮನ್‍ವೆಲ್ತ್ ಕ್ರೀಡೆಗಳಲ್ಲಿ ಪಾರಂಪರಿಕವಾಗಿ ಪ್ರಭಲವಿದ್ದ ಕ್ರೀಡೆಗಳ ಜೊತೆಗೆ ನಮ್ಮ ಕ್ರೀಡಾಪಟುಗಳು ಬೇರೆ ಸ್ಪರ್ಧೆಗಳಲ್ಲೂ ಪದಕಗಳನ್ನು ಗೆಲ್ಲುತ್ತಿರುವುದು ಎಲ್ಲಾ ಭಾರತೀಯರಿಗೂ ಸಂತಸ ತಂದಿದೆ.
ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಳಿಗೆ ಇದೆ ಎನ್ನುವ ಮಾತನ್ನು, ದೇಶದ ನಾನಾ ಕಡೆಗಳಿಂದ ಸೇರಿದ ಕ್ರೀಡಾಪಟುಗಳು ದೇಶದ ಕೀರ್ತಿ ಕಾಮನ್‍ವೆಲ್ತ್ ಕ್ರೀಡೆಗಳಲ್ಲಿ ಎತ್ತಿ ಹಿಡಿಯುತ್ತಿರುವುದು, ರುಜು ಮಾಡಿದೆ.
ಗೆದ್ದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಮುಂದಿನ ಸ್ಪರ್ಧೆಗಳಿಗೆ ಶುಭ ಹಾರೈಕೆಗಳು
#India4CWG2022 #Sports #CWG2022India

Illegal and forcible eviction of poor people should stop immediately, 02/08/2022
ವಿರಾಜಪೇಟೆ ಆರ್ಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆರಮೆಕಾಡು ಪೈಸಾರಿ ತೆರವು ಕಾರ್ಯಾಚರಣೆಯನ್ನು ತಾಲೂಕು ಆಡಳಿತ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದೇನೆ. ಸರ್ಕಾರ ಜನವಿರೋಧಿ ಧೋರಣೆಯನ್ನು ಕೈಬಿಟ್ಟು ಜನರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈ ಹಾಕಬಾರದು.
ಸ್ಥಳೀಯ ನಿವಾಸಿಗಳ ಕೋರಿಕೆಯ ಮೇರೆಗೆ ತೆರಮೆಕಾಡು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲುಗಳನ್ನು ಆಲಿಸಿದ್ದೇನೆ. ಒಂದು ವೇಳೆ ತಾಲೂಕು ಆಡಳಿತ ಒತ್ತಡಕ್ಕೆ ಮಣಿದು ಮತ್ತೆ ಕಾರ್ಯಾಚರಣೆ ಮುಂದುವರಿಸಿದರೆ ಕಾನೂನು ಹೋರಾಟ ಅನಿವಾರ್ಯವಾದಿತು ಎಂದು ಎಚ್ಚರಿಸಿದ್ದೇನೆ.
ಸ್ಥಳಕ್ಕೆ ಸಂಬಂಧಿಸಿದ ಬಹಳಷ್ಟು ದಾಖಲೆಗಳನ್ನು ಪರಿಶೀಲಿಸಿದಾಗ ಈ ಕಾರ್ಯಾಚರಣೆ ಕಾನೂನಾತ್ಮಕವಾಗಿಲ್ಲ ಎಂಬುದು ತಿಳಿದು ಬರುತ್ತದೆ. ತೆರವು ಮಾಡುವ ಕುರಿತು ಯಾವುದೇ ಸ್ಪಷ್ಟ ಆದೇಶವಿಲ್ಲ. ಯಾವುದೇ ಕಾನೂನು ಕ್ರಮಗಳನ್ನು ಪಾಲಿಸದೆ ಏಕಾಏಕಿ ತೆರವುಗೊಳಿಸುವ ಕಾರ್ಯಾಚರಣೆಯ ಹಿಂದಿರುವ ಉದ್ದೇಶ ನಿಗೂಢವಾಗಿದೆ. ಇದೀಗ ಈ ಪ್ರದೇಶದಲ್ಲಿ ನೂರಾರು ಸಂಖ್ಯೆಯ ಬಡಜನರು ಮನೆ ನಿರ್ಮಿಸಿ ವಾಸಿಸುತ್ತಿದ್ದು, ಇವರಿಗೆ ಕಾನೂನು ಹೋರಾಟದ ಮೂಲಕ ರಕ್ಷಣೆ ನೀಡಲು ಬದ್ಧನಾಗಿದ್ದೇನೆ.
ಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ವಿರಾಜಪೇಟೆ ನಗರ ಅಧ್ಯಕ್ಷರಾದ ಎಂ.ಪಿ. ತಿಮ್ಮಯ್ಯ, ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ, ಜಿ. ಪಂ. ಮಾಜಿ ಸದಸ್ಯ ಬಿ.ಎನ್ ಪ್ರಥ್ಯು, ವಕೀಲರಾದ ಬೊಪಣ್ಣ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಶಿವಣ್ಣ, ನಾಗೇಶ್, ಗಾಯತ್ರಿ, ಸ್ಥಳೀಯ ಮುಖಂಡರಾದ ಗಿರಿ, ಅನಿಲ್ ಮೊದಲಾದವರು ಜೊತೆಗಿದ್ದರು.
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet

Channel Coorg interviews A S Ponnanna, 01/08/2022
ಚಾನೆಲ್ ಕೂರ್ಗ್ ಸುದ್ದಿವಾಹಿನಿಯ ನೇರಾ-ನೇರ ಸಂದರ್ಶನದಲ್ಲಿ ಪಾಲ್ಗೊಂಡು ಕೊಡಗಿಗೆ ಸಂಬಂಧಪಟ್ಟ, ರಾಜಕೀಯ, ಆರ್ಥಿಕ, ಅಭಿವೃದ್ಧಿ, ಸಾಮಾಜಿಕ ಮುಂತಾದ ಹಲವಾರು ವಿಚಾರಗಳ ಪರಿಸ್ಥಿತಿ ಮತ್ತು ಸಮಸ್ಯೆಗಳ ಬಗ್ಗೆ ನನ್ನ ಅಭಿಪ್ರಾಯ ಹಂಚಿಕೊಂಡೆ.
ಎಲ್ಲಾ ಪ್ರಶ್ನೆಗಳಿಗೆ ನನ್ನ ಸ್ಪಷ್ಟ ಉತ್ತರಗಳನ್ನು ಕೊಟ್ಟಿದ್ದೇನೆ. ಸಂದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಚಾನೆಲ್ ಕೂರ್ಗ್ ಅವರಿಗೆ ಧನ್ಯವಾದಗಳು.
ಪೂರ್ಣ ಸಂದರ್ಶನವನ್ನು ನೋಡಲು ಈ ಕೆಳಗಿನ ಲಿಂಕ್ ಉಪಯೋಗಿಸಿ ☛ https://www.youtube.com/watch?v=tHgD1F1D_fk
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje #ChannelCoorg #NeraNera