Ground breaking ceremony of Patalamma Devi temple in Gonikoppal, 20/06/2022
ಗೋಣಿಕೊಪ್ಪಲಿನ ಪಟಾಲಮ್ಮ ದೇವಿ ದೇವಾಲಯ ಪುನಶ್ಚೇತನ ಕಾರ್ಯಕ್ಕೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದೆ. ಈ ಕಾರ್ಯಕ್ಕೆ ದೇವರು ನನ್ನ ಕೈಲಾದ ಸಹಾಯ ಮಾಡಿಸಿದ್ದಾರೆ.
ಬಹಳ ದಿನಗಳಿಂದ ದೇವಾಲಯದಲ್ಲಿ ದೇವರ ಕಾರ್ಯ ನೆರವೇರದೆ ಭಕ್ತರಿಗು ಹಾಗೂ ಸ್ಥಳೀಯ ಜನರಿಗೆ ಬಹಳ ಸಂಕಟವಾಗಿತ್ತು. ಈ ಪುನಶ್ಚೇತನ ಕಾರ್ಯದಿಂದ ಎಲ್ಲರ ಮೇಲೂ ದೇವರ ಕೃಪೆ ಬರಲಿದೆ ಎನ್ನುವುದು ನನ್ನ ನಂಬಿಕೆ.
ಈ ಕಾರ್ಯದಲ್ಲಿ ಪಾಲ್ಗೊಂಡ ಸ್ಥಳೀಯ ಮುಖಂಡರು, ಹಿರಿಯರು ಮತ್ತು ದೇವರ ಕೃಪೆಗೆ ಪಾತ್ರರಾದ ಎಲ್ಲಾ ಜನರಿಗೂ ನನ್ನ ಧನ್ಯವಾದಗಳು.
#Kodagu #Coorg #Madikeri #Gonnikoppal #Temple #Kushalnagar

Meeting with NSUI State President and office bearers, 16/06/2022
ಎನ್.ಎಸ್.ಯು.ಐ ನ ರಾಜ್ಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನನ್ನನು ಭೇಟಿ ಮಾಡಿ, ಅವರ ಅಕ್ರಮ ಬಂಧನದ ವಿರುದ್ಧ ಜಾಮೀನಿಗೆ ನಾನು ಮಾಡಿದ ಕಾನೂನು ಹೋರಾಟಕ್ಕೆ ಧನ್ಯವಾದ ತಿಳಿಸಿದರು.
ಅವರುಗಳ ಜೊತೆ ಮಾತನಾಡಿ ಹಲವಾರು ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿದೆ. ಸರ್ಕಾರಗಳು ಇಡುವ ತಪ್ಪು ಹೆಜ್ಜೆಗಳ ವಿರುದ್ಧ ಯುವಜನ ಮತ್ತು ವಿದ್ಯಾರ್ಥಿಗಳು ಸದಾ ಜಾಗರೂಕರಾಗಿರಬೇಕು. ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ನಾವು ಸದಾ ಕಾಯುತ್ತಾ ಇರಬೇಕು.
ಅವರ ಹೋರಾಟಕ್ಕೆ ನಮ್ಮ ಕಾನೂನು ಘಟಕದ ಬೆಂಬಲ ಸದಾ ಇರುತ್ತದೆ ಎನ್ನುವ ಆಶ್ವಾಸನೆಯನ್ನು ಅವರಿಗೆ ನೀಡಿದ್ದೇನೆ.
#Kodagu #Coorg #Madikeri #Ponnmpet #Kishalnagar #Virajpet #NSUI #TextBooks

Place ideology above self-interest, 15/06/2022
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗದ ಬಗ್ಗೆ ಮಾತನಾಡಿದೆ.
ಸ್ವಹಿತಾಸಕ್ತಿಯನ್ನು ಬದಿಗಿಟ್ಟು ಪಕ್ಷದ ತತ್ವ ಸಿದ್ಧಾಂತಗಳ ನಂಬಿಕೆಯ ಮೇಲೆ ಮುನ್ನಡೆಯಬೇಕು. ವ್ಯಕ್ತಿಗಿಂತ ಪಕ್ಷದ ತತ್ವಗಳಿಗೆ ನಿಷ್ಠೆಯೇ ಅತಿ ಮುಖ್ಯವಾದ ವಿಚಾರ. ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರಿಗೂ ಅನ್ವಹಿಸುವ ವಿಷಯವಿದು.
ಕಾರ್ಯಕ್ರಮದಲ್ಲಿ ಪದಗ್ರಹಣ ವಹಿಸಿದ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆಗಳು. ಪಾಲ್ಗೊಂಡ ಎಲ್ಲಾ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಪಕ್ಷದ ಬೆಂಬಲಿಗರಿಗೂ ಧನ್ಯವಾದಗಳು.
#Kodagu #Coorg #Madikeri #Ponnmpet #Kishalnagar #Virajpet
Sports has the power to unite people, 14/06/2022
ಎಸ್.ಆರ್.ಎಸ್.ಕ್ರಿಕೆಟರ್ಸ್ ಮೂರ್ನಾಡು ಮತ್ತು ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಬಾಚೆಟ್ಟಿರ ಲಾಲು ಮುದ್ದಯ್ಯ ಮೈದಾನದಲ್ಲಿ ನಡೆದ 18ನೇ ಕೊಡಗು ಜಿಲ್ಲಾ ಮುಸ್ಲಿಂ ಕ್ರಿಕೆಟ್ ಕಪ್ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಸಂಧರ್ಭ.
ಕ್ರೇಡೆಗೆ ಜನರನ್ನು ಒಗ್ಗೂಡಿಸುವ ಶಕ್ತಿ ಇದೆ. ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಕ್ರೀಡೆ ನಮ್ಮನ್ನು ಒಂದೇ ವೇದಿಕೆಯಲ್ಲಿ ಸಮನಾಗಿ ತಂದು ಕೂಡಿಸುತ್ತದೇ. ದೈಹಿಕ ಆರೋಗ್ಯ ಮಾತ್ರವಲ್ಲದೆ ನಮ್ಮ ಮಾನಸಿಕ ಆರೋಗ್ಯಕ್ಕೂ ಕ್ರೀಡೆ ಅವಶ್ಯಕತೆ ಇದೆ.
ಈಗಿನ ಆರ್ಥಿಕ ಸಂಕಷ್ಟದ ಸಮಯದಲ್ಲೂ ಪಂದ್ಯಾವಳಿಗಳನ್ನು ಆಯೋಜಿಸಿದ್ದ ಆಯೋಜಕರಿಗೂ, ಕ್ರೀಡಾಮನೋಭಾವದಿಂದ ಪಂದ್ಯಗಳಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೂ ಅಭಿನಂದನೆಗಳು.
#Kodagu #Coorg #Madikeri #Ponnmpet #Kishalnagar #Virajpet #Cricket #Sports #Murnad

Visit to the Sri Kadasiddeshwara Mutt in Tiptur, 10/06/2022
ತಿಪಟೂರಿನ ನೊಣವಿನಕೆರೆಯ ಶ್ರೀ ಕಾಡ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ಪೂಜೆ ಸಲ್ಲಿಸಿ ಕಿರಿಯ ಶ್ರೀಗಳಿಂದ ಆಶೀರ್ವಾದ ಪಡೆದೆ.
ಕರ್ನಾಟಕದ ಆಧ್ಯಾತ್ಮ ಹಾಗೂ ಸಮಾಜಿಕೆ ಕ್ಷೇತ್ರಕ್ಕೆ ಮಠದ ಕೊಡುಗೆ ಅನನ್ಯವಾದುದು. ಕ್ಷೇತ್ರದಲ್ಲಿ ಇರುವ ಪ್ರತಿ ಕ್ಷಣವೂ ಧನ್ಯತಾ ಭಾವನೆ ಕೊಡುತ್ತದೆ.
ಕಿರಿಯ ಶ್ರೀಗಳ ಜೊತೆ ಕೆಲ ಸಮಯ ವಿಚಾರ ವಿನಿಮಯ ನಡೆಸಿದೆ. ಇಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಬಗ್ಗೆಯೂ ವಿಚಾರಿಸಿದೆ.
#Kodagu #Coorg #Madikeri #Ponnmpet #Kishalnagar #Virajpet #Nonavinakere #KadaSiddeshwara #Tiptur #Temple
