Padmashree Awardee Timmakka, a centenary, an environment lover, who planted thousands of plants and conveyed a message about the importance of nature to today's generation, I am very sad to hear about the departure of Padmashree Award, Timmakka. Their sep, 14/11/2025

*ಸಾಲುಮರದ ತಿಮ್ಮಕ್ಕ* ಎಂದೇ ಖ್ಯಾತಿ ಹೊಂದಿದ ಶತಾಯುಷಿ, ಪರಿಸರ ಪ್ರೇಮಿ, ಸಾವಿರಾರು ಗಿಡಗಳನ್ನು ನೆಟ್ಟು ಇಂದಿನ ಪೀಳಿಗೆಗೆ ಪ್ರಕೃತಿಯ ಪ್ರಾಮುಖ್ಯತೆ ಬಗ್ಗೆ ಸಂದೇಶ ಸಾರಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ತಿಮ್ಮಕ್ಕ ರವರು ಇಂದು ನಮ್ಮನ್ನು ಅಗಲಿದ ಸುದ್ದಿ ತಿಳಿದು ಅತೀವ ದುಃಖ ಉಂಟಾಗಿದೆ.
ಅವರ ಅಗಲಿಕೆಯು ನಾಡಿಗೆ ತುಂಬಲಾರದ ನಷ್ಟ.
ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಅಪಾರ ಅಭಿಮಾನಿಗಳಿಗೆ ಹಾಗೂ ಬಂಧು ಬಳಗಕ್ಕೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

Participated in Children's Day celebration with the children of Government Model Primary School in Virajpet and wishing them good luck for their bright future, 14/11/2025

ವಿರಾಜಪೇಟೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ‌ ಚಿಣ್ಣರ ಜೊತೆ ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದೆ.


India's first Prime Minister 'Bharat Ratna' Happy Children's Day celebrated as a symbol of love for children on Pandit Jawaharlal Nehru's birthday, 14/11/2025

ಭಾರತದ ಮೊದಲ ಪ್ರಧಾನಿ 'ಭಾರತ ರತ್ನ'
ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಮಕ್ಕಳ ಬಗೆಗಿನ ಅವರ ಅತೀವ ಪ್ರೀತಿಯ ಸಂಕೇತವಾಗಿ ಆಚರಿಸಲಾಗುವ 'ಮಕ್ಕಳ ದಿನಾಚರಣೆ'ಯ ಶುಭಾಶಯಗಳು.

Kodagu District Commerce and Industrial Institute Gonikoppa and The Merchants Credit Co-operative Society Limited. While participating in the felicitation program for Cheppudeera Arun Machaiah who has been elected as the Vice President of Karnataka Sports, 13/11/2025

ಕೊಡಗು ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ ಗೋಣಿಕೊಪ್ಪ ಮತ್ತು ದ ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ರಿ. ಇವರು ಜಂಟಿಯಾಗಿ ಆಯೋಜಿಸಿದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಚೆಪ್ಪುಡೀರ ಅರುಣ್ ಮಾಚಯ್ಯರವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ


Napoklu Town Sunni Muhiyuddin Juma Masjid, foundation programme of newly constructed Shadi Mahal building was held at Cheriyaparambu of Madikeri Taluk Napoklu block, 13/11/2025

ನಾಪೋಕ್ಲು ಟೌನ್ ಸುನ್ನೀ ಮುಹಿಯದ್ದೀನ್‌ ಜುಮಾ ಮಸೀದಿ ಇವರ ಆಶ್ರಯದಲ್ಲಿ ಮಡಿಕೇರಿ ತಾಲೂಕು ನಾಪೋಕ್ಲು ಬ್ಲಾಕ್ ನ ಚೆರಿಯಪರಂಬುವಿನಲ್ಲಿ, ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಶಾದಿ ಮಹಲ್ ಕಟ್ಟಡದ ಶಿಲನ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಾಯಿತು.