News reports on the All-India Football tournament in Gonikoppal, 27/06/2022
ಗೋಣಿಕೊಪ್ಪಲುವಿನಲ್ಲಿ ಕೆಲದಿನಗಳ ಹಿಂದೆ ನಾನು ಉದ್ಘಾಟಿಸಿದ ಆಲ್ ಇಂಡಿಯಾ 7s ಫುಟ್ಬಾಲ್ ಪಂದ್ಯಾವಳಿಯ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ವರದಿಯಾಗಿದೆ.
ಯುವಜನತೆ ಕೆಟ್ಟ ಅಭ್ಯಾಸಗಳಿಂದ ದೂರವಿರಲು ಮತ್ತು ಕೆಟ್ಟ ವ್ಯಾಸನಗಳಿಂದ ಮುಕ್ತಿ ಪಡೆಯಲು ಕ್ರೀಡಾಕೂಟಗಳ ಮಹತ್ವದ ಬಗ್ಗೆ ನಾನು ಹೇಳಿದ ಮಾತುಗಳು ಮಾಧ್ಯಮದ ಮಿತ್ರರು ವರದಿ ಮಾಡಿದ್ದಾರೆ. ಯುವಜನರನ್ನು ಸರಿಯಾದ ದಾರಿಯಲ್ಲಿ ನಡೆಸಲು ಮತ್ತು ಎಲ್ಲಾ ಜನಾಂಗದ ಜನರನ್ನು ಒಟ್ಟುಗೂಡಿಸುವ ಶಕ್ತಿ ಕ್ರೀಡೆಗೆ ಮಾತ್ರ ಇದೆ ಎನ್ನುವ ಮಾತನ್ನು ಇಲ್ಲಿ ಮತ್ತೊಮ್ಮೆ ಹೇಳುತ್ತೇನೆ.
ಜಿಲ್ಲಾ ಪಂಚಾಯತ್ ಕೊಡಗು ನೆಹರು ಯುವ ಕೆಂದ್ರ, ಕ್ರೀಡಾ ಸಚಿವಾಲಯ ಹಾಗೂ ಆಲ್ ಸ್ಟಾರ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಈ ಪಂದ್ಯಾವಳಿಗಳು ಯಶಸ್ವಿಯಾಗಿ ಆಯೋಜನೆಯಾಗಿದಕ್ಕೆ ಮತ್ತೊಮ್ಮೆ ನನ್ನ ಅಭಿನಂದನೆಗಳು.
#Kodagu #Coorg #Madikeri #Virajpet #Kushalnagar #Gonikoppal

All-India Football tournament in Gonikoppal, 23/06/2022
ಗೋಣಿಕೊಪ್ಪಲುವಿನಲ್ಲಿ ಆಲ್ ಸ್ಟಾರ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಆಲ್ ಇಂಡಿಯಾ 7s ಫುಟ್ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಪಾಲ್ಗೊಂಡ ಕ್ರೀಡಾಪಟುಗಳಿಗೂ, ಆಯೋಜಕರಿಗೂ ಶುಭಕೋರಿದೆ.
ರಾಷ್ಟ್ರಮಟ್ಟದ ಮತ್ತು ಅಂತರಾಷ್ಟೀಯ ಕ್ರೀಡಾಪಟುಗಳು ಸತತವಾಗಿ ಕೊಡುಗೆ ಕೊಟ್ಟಿರುವ ಕೊಡಗು ಜಿಲ್ಲೆಗೆ ಇದು ಸಾಧ್ಯವಾಗಿರುವುದು ಈ ರೀತಿಯ ಒಳ್ಳೆಯ ಪಂದ್ಯಾವಳಿಗಳ ಆಯೋಜನೆಯಿಂದ.
ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು ಆಯೋಜಿಸಿದ ಕ್ಲಬ್'ನ ಆಡಳಿತ ವರ್ಗಕ್ಕೂ, ಪಂದ್ಯಾವಳಿಯಲ್ಲಿ ಕ್ರೀಡಾಮನೋಭಾವದಿಂದ ಪಾಲ್ಗೊಂಡ ಕ್ರೀಡಾಪಟುಗಳಿಗೂ, ನನನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದ ಆಯೋಜಕರಿಗೂ ನನ್ನ ಧನ್ಯವಾದಗಳು.
#Kodagu #Coorg #Madikeri #Virajpet #Kushalnagar #Gonikoppal

Visit to Karekad Colony and interaction with locals, 22/06/2022
ಅರ್ವತೋಕ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರೆಕಾಡ್ ಕಾಲೋನಿಗೆ ಭೇಟಿ ನೀಡಿ ಅಲ್ಲಿಯ ಸ್ಥಳೀಯರ ಜೊತೆ ಅವರ ಸಮಸ್ಯೆಗಳನ್ನು ಆಲಿಸಿ ಅವನ್ನು ಬಗೆಹರಿಸುವ ಬಗ್ಗೆ ಚರ್ಚೆ ನಡೆಸಿದೆ.
ಕೊಡಗಿನ ಹಲವಾರು ಗ್ರಾಮಗಳ ರೀತಿಯಲ್ಲಿ ಕರೆಕಾಡ್ ಕೂಡ ಆಡಳಿತ ನಿರ್ಲಕ್ಷ್ಯಕ್ಕೆ ಒಳಗಾಗಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ.
ಸ್ಥಳೀಯರ ಜೊತೆ ಸಂವಾದದಲ್ಲಿ ಅಲ್ಲಿನ ಬಹುತೇಕ ಸಮಸ್ಯೆಗಳಿಗೆ ಆಡಳಿತ ವ್ಯವಸ್ಥೆ ಕಾರ್ಯೋನ್ಮುಖವಾದರೆ ಪರಿಹಾರ ಪಡೆಯಬಹುದೆಂಬುದು ಮನವರಿಕೆಯಾಗಿದೆ. ನನ್ನ ಕಡೆಯಿಂದ ಮಾಡಬಹುದಾದ ಎಲ್ಲಾ ಸಹಾಯವನ್ನು ಮಾಡುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದೇನೆ.
#Kodagu #Coorg #Madikeri #Virajpet #Kushalnagar #Karekad #Arvathoklu

Establishment of Virajpet unit of Karnataka Union of Working Journalists , 21/06/2022
ಹೊಸದಾಗಿ ಸ್ಥಾಪನೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿರಾಜಪೇಟೆ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಪತ್ರಿಕೋದ್ಯಮದ ದಿಕ್ಸೂಚಿ ಬಾಷಣ ಮಾಡುವ ಅವಕಾಶ ಒದಗಿಬಂತು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದೇ ಗುರುತಿಸಿಕೊಂಡಿರುವ ಪತ್ರಿಕೋದ್ಯಮ ಇಂದು ಒಂದು ಪ್ರಮುಖ ಕಾಲಘಟ್ಟದಲ್ಲಿ ನಿಂತಿದೆ. ಸಮಾಜದ ನೈತಿಕತೆ ಮತ್ತು ಸ್ವಾಸ್ತ್ಯದ ಜವಾಬ್ದಾರಿ ಅನಿವಾರ್ಯವಾಗಿ ಪತ್ರಕರ್ತರ ಹೆಗಲ ಮೇಲೆ ಇದೆ. ನಮ್ಮ ದೇಶದಲ್ಲಿ ಮೂಲಭೂತ ಹಕ್ಕಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಜವಾಬ್ದಾರಿ ಇರುವುದು ಪತ್ರಕರ್ತರ ಮೇಲೆ.
ಮಾನವೀಯ ನೆಲೆಗಟ್ಟಿನ ಮೇಲೆ ಸಮಾಜವನ್ನು ಪೋಷಿಸುವ ಮತ್ತು ಸಂಘಟಿಸುವ ಕಾರ್ಯ ಪತ್ರಕರ್ತರಿಂದ ಇನ್ನು ಹೆಚ್ಚಾಗಿ ಆಗಬೇಕಿದೆ ಎನ್ನುವ ಮಾತನ್ನು ಹೇಳಿದೆ.
ಈ ಕಾರ್ಯಕ್ರಮದಲ್ಲಿ ಪದಗ್ರಹಣ ಮಾಡಿದ ಎಲ್ಲಾ ಪದಾಧಿಕಾರಿಗಳಿಗೂ, ಪಾಲ್ಗೊಂಡ ಎಲ್ಲಾ ಪತ್ರಕರ್ತರು ಹಾಗೂ ಹಿತೈಷಿಗಳಿಗೂ ಅಭಿನಂದನೆ ಮತ್ತು ಧನ್ಯವಾದಗಳು. ದಿಕ್ಸೂಚಿ ಬಾಷಣ ಮಾಡುವ ಅವಕಾಶ ಮಾಡಿಕೊಟ್ಟ ಆಡಳಿತ ಸಮಿತಿಗೆ ಧನ್ಯವಾದಗಳು.
#Kodagu #Coorg #Madikeri #Gonnikoppal #Virajpet #Kushalnagar #Journalism #Journalists #KUWJ

Ground breaking ceremony of Patalamma Devi temple in Gonikoppal, 20/06/2022
ಗೋಣಿಕೊಪ್ಪಲಿನ ಪಟಾಲಮ್ಮ ದೇವಿ ದೇವಾಲಯ ಪುನಶ್ಚೇತನ ಕಾರ್ಯಕ್ಕೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದೆ. ಈ ಕಾರ್ಯಕ್ಕೆ ದೇವರು ನನ್ನ ಕೈಲಾದ ಸಹಾಯ ಮಾಡಿಸಿದ್ದಾರೆ.
ಬಹಳ ದಿನಗಳಿಂದ ದೇವಾಲಯದಲ್ಲಿ ದೇವರ ಕಾರ್ಯ ನೆರವೇರದೆ ಭಕ್ತರಿಗು ಹಾಗೂ ಸ್ಥಳೀಯ ಜನರಿಗೆ ಬಹಳ ಸಂಕಟವಾಗಿತ್ತು. ಈ ಪುನಶ್ಚೇತನ ಕಾರ್ಯದಿಂದ ಎಲ್ಲರ ಮೇಲೂ ದೇವರ ಕೃಪೆ ಬರಲಿದೆ ಎನ್ನುವುದು ನನ್ನ ನಂಬಿಕೆ.
ಈ ಕಾರ್ಯದಲ್ಲಿ ಪಾಲ್ಗೊಂಡ ಸ್ಥಳೀಯ ಮುಖಂಡರು, ಹಿರಿಯರು ಮತ್ತು ದೇವರ ಕೃಪೆಗೆ ಪಾತ್ರರಾದ ಎಲ್ಲಾ ಜನರಿಗೂ ನನ್ನ ಧನ್ಯವಾದಗಳು.
#Kodagu #Coorg #Madikeri #Gonnikoppal #Temple #Kushalnagar
