Inauguration of Sahara Club Cricket finals in Chennayanakote, 23/05/2022

Meeting with representatives of forest department workers , 22/05/2022

Visit to Perur Sri Igguthappa temple, 20/05/2022
ಪೇರೂರು ಶ್ರೀ ಈಶ್ವರ ಇಗುತ್ತಪ್ಪ ದೇವಸ್ಥಾನದ ಅಷ್ಟಬಂದ ಬ್ರಹ್ಮ ಕಲಶೋತ್ಸವದಲ್ಲಿ ಭಾಗಿಯಾದ ಸಂದರ್ಭ. ಭಕ್ತರೊಂದಿಗೆ ದೇವರ ಆಶೀರ್ವಾದ ಪಡೆದು ದೇವರ ಪ್ರಸಾದ ಸ್ವೀಕರಿಸಿದೆ.
ಇದೇ ಸಂಧರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ದೇವರ ಆಶೀರ್ವಾದದಿಂದ ನನ್ನ ಸಹಾಯ ಹಸ್ತ ನೀಡುವ ಸೌಭಾಗ್ಯ ನನ್ನದಾಯಿತು. ಇದೆಲ್ಲಾ ಇಗುತ್ತಪ್ಪ ದೇವರು ನನ್ನ ಕೈಯಲ್ಲಿ ಮಾಡಿಸಿದ್ದು ಎನ್ನುವುದು ನನ್ನ ಭಾವನೆ.
ಎಲ್ಲಾ ಜನರ ಮೇಲೆ ಇಗುತ್ತಪ್ಪ ದೇವರ ಆಶೀರ್ವಾದ ಇರಲೆಂದು ಪ್ರಾರ್ಥಿಸಿದೆ. ದಿನಾಂಕ 15 ಮೇ ದಿನ ನಡೆದ ವಿವಿಧ ಪೂಜಾ ಕಾರ್ಯಕ್ರಮಗಳು ಭಕ್ತರ ಕಣ್ಣು ತುಂಬಿದವು. ದೇವಸ್ಥಾನದ ಆಡಳಿತ ಮಂಡಳಿಗೂ, ಸ್ಥಳೀಯರಿಗೂ, ಭಕ್ತಾದಿಗಳಿಗೂ ನನ್ನ ನಮನಗಳು.
#Igguthappa #Kodagu #Coorg #Virajpet #Perur #Ponnmpet #Kushalnagar #Madikeri
Felicitation at Hudikeri village , 19/05/2022
ವಿರಾಜಪೇಟೆಯ ಹುದಿಕೇರಿ ಗ್ರಾಮಸ್ಥರು ತಮ್ಮ ಸ್ಥಳೀಯ ಕಾನೂನು ಸಮಸ್ಯೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಾನು ಪ್ರತಿನಿಧಿಸಿದಕ್ಕೆ ನನಗೆ ಸನ್ಮಾನಿಸಿದರು. ನನಗೆ ಗ್ರಾಮಸ್ಥರು ಕೊಟ್ಟ ಈ ಗೌರವಕ್ಕೆ ನಾನು ಅವರಿಗೆ ಚಿರಋಣಿ.
ಕಾನೂನಿನ ನೆರವು ಪಡೆಯುವುದರಲ್ಲಿ ಸಹಕರಿಸುವುದು ನನ್ನ ಕರ್ತವ್ಯ ಮಾತ್ರವಲ್ಲದೆ ನನ್ನ ಹೊಣೆ ಎಂದು ನಾನು ನಂಬಿದ್ದೇನೆ. ಹುದಿಕೇರಿಯ ಎಲ್ಲಾ ಗ್ರಾಮಸ್ಥರಿಗೂ, ಹಿರಿಯರಿಗೂ, ಮುಖಂಡರಿಗೂ ನಾನು ಮತ್ತೊಮ್ಮೆ ನಮಿಸುತ್ತೇನೆ. ????
#Kodagu #Coorg #Virajpet #Hudikeri #Ponnmpet #Kushalnagar #Madikeri
Inauguration of Kallubane Cricket tournament finals at Arji Panchayat , 17/05/2022
ಕಲ್ಲುಬಾಣಿ ಯೂಥ್ ಅಸೋಸಿಯೇಷನ್ ಅವರು ಆಯೋಜಿಸಿದ್ದ ಕಲ್ಲುಬಾಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಸ್ ಪಂದ್ಯವನ್ನು ಉದ್ಘಾಟಿಸಿ ಪಂದ್ಯವನ್ನು ವೀಕ್ಷಿಸಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಒದಗಿ ಬಂತು.
ಮೂರು ದಿನಗಳ ಪಂದ್ಯಾವಳಿಗಳು ಅಚ್ಚುಕಟ್ಟಾಗಿ ಆಯೋಜಿಸಿದ್ದ ಆಯೋಜಕರಿಗೂ, ಕ್ರೀಡಾ ಮನೋಭಾವದಿಂದ ಪಂದ್ಯಗಳಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೂ ಅಭಿನಂದನೆಗಳು.
ಕ್ರೀಡಾ ಕೌಶಲ್ಯ ಮಾತ್ರವಲ್ಲದೆ, ಸ್ನೇಹ ಮನೋಭಾವ ಮತ್ತು ಒಟ್ಟಾಗಿ ಪ್ರಗತಿ ಸಾಧಿಸುವುದನ್ನು ಕ್ರೀಡೆ ನಮಗೆ ಕಲಿಸುತ್ತದೆ. ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಕೊಟ್ಟ ಆಯೋಜಕರಿಗೆ ಮತ್ತೊಮ್ಮೆ ಧನ್ಯವಾದಗಳು.
#Kodagu #Coorg #Virajpet #Ponnampet #Madikeri #Kushalnagar #Cricket #Sports #Kallubane