New Women’s Society Building in Hudikeri Ready for Public Use, 14/07/2026

ಪೊನ್ನಂಪೇಟೆ ತಾಲೂಕು ಹುದಿಕೇರಿ ಗ್ರಾಮದ ಮಹಿಳಾ ಸಮಾಜದ ನವೀಕೃತ ಕಟ್ಟಡ ಬಳಕೆಗೆ ಸಿದ್ಧವಾಗಿದೆ.

 


Mrs. Kanchan Ponnanna Participates in Kempegowda Jayanti Sports Event, Extends Best Wishes, 13/07/2026

ವಿರಾಜಪೇಟೆ, ಪೊನ್ನಂಪೇಟೆ ಹಾಗೂ ಹಾತೂರು ಒಕ್ಕಲಿಗರ ಸಂಘ (ರಿ) ರವರು ಹಾತೂರಿನಲ್ಲಿ ಆಯೋಜಿಸಿದ, ಕೆಂಪೇಗೌಡ ಜಯಂತಿ ಪ್ರಯುಕ್ತ 5ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದಲ್ಲಿ, ನನ್ನ ಅಲಭ್ಯತೆಯನ್ನು ಪರಿಗಣಿಸಿ ನನ್ನ ಪರವಾಗಿ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಕೋರಿದ ಸಂದರ್ಭ.

 


Claim Forms Distributed to Hundreds of Gonikoppa Gram Panchayat Residents, 13/07/2026

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಯ ನೂರಾರು ನಿವಾಸಿಗಳಿಗೆ ಹಕ್ಕು ಪತ್ರ ವಿತ್ತರಿಸಲಾಯಿತು.


Deep Condolences on the Demise of Legendary Singer S. Janaki, 13/07/2026

ಕನ್ನಡ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕಿ, ಹತ್ತಾರು ಪ್ರಶಸ್ತಿಗಳ ಪುರಸ್ಕೃತೆ, ಗಾನಕೋಗಿಲೆ ಶ್ರೀಮತಿ ಎಸ್. ಜಾನಕಿ ರವರ ನಿಧನದ ಸುದ್ದಿ ತಿಳಿದು ಅತೀವ ದುಃಖ ಉಂಟಾಗಿದೆ.
ಕನ್ನಡ ಮಾತ್ರವಲ್ಲದೆ ಅನೇಕ ಭಾಷೆಗಳಲ್ಲಿ ತಮ್ಮ ಅದ್ಭುತ ಕಂಠಸಿರಿಯನ್ನು ಮೆರೆದು, ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ, ಸರ್ವಶಕ್ತ ಭಗವಂತ ಅವರ ಕುಟುಂಬ ವರ್ಗದವರಿಗೆ, ಬಂಧು-ಮಿತ್ರರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
 

Pandanda Bopanna Transfers 2027 Kodava Hockey Festival Hosting Rights, 11/07/2026

2027 ನೇ ಸಾಲಿನ ಕೊಡವ ಹಾಕಿ ಉತ್ಸವದ ಆತಿಥ್ಯದ ಹಕ್ಕು ಹಸ್ತಾಂತರ ಕಾರ್ಯಕ್ರಮ ಶ್ರೀ ಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾದ ಪಾಂಡಂಡ ಬೋಪಣ್ಣ ರವರು ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಅಧ್ಯಕ್ಷರಾದ ನರೇನ್ ಕಾರ್ಯಪ್ಪ ರವರಿಗೆ ಹಾಸ್ತಾಂತರಿಸಿದ ಸಂದರ್ಭ
ಈ ಸಂದರ್ಭದಲ್ಲಿ ನನ್ನೊಂದಿಗೆ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ, ಅಜ್ಜಿಕುಟ್ಟಿರ ಕುಟುಂಬಸ್ಥರು, ಹಾಗೂ ಹಾಕಿ ಉತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.