Valmiki Jayanthi was celebrated today at Bangalore Vidhana Soudha Hall chaired by Karnataka State Chief Minister Shri Siddaramaiah. J of Virajpet constituency of Kodagu came to the forefront of the society from the tribes and fought for rehabilitation to , 07/10/2025
ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನಸೌಧ ಸಭಾಂಗಣದಲ್ಲಿ ಇಂದು ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬುಡಕಟ್ಟು ಜನಾಂಗದಿಂದ ಸಮಾಜದ ಮುನ್ನೆಲೆಗೆ ಬಂದು, ನಿರಾಶ್ರಿತರಿಗೆ ದಿಡ್ಡಳ್ಳಿಯಲ್ಲಿ ಪುನರ್ವಸತಿ ಕಲ್ಪಿಸಲು ಹೋರಾಟ ಮಾಡಿ ಯಶಸ್ಸು ಗಳಿಸಿದ, ಕೊಡಗಿನ ವಿರಾಜಪೇಟೆ ಕ್ಷೇತ್ರದ ಜೆ.ಕೆ ಮುತ್ತಮ್ಮರವರಿಗೆ ಪ್ರತಿಷ್ಠಿತ ವಾಲ್ಮೀಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Best wishes on the occasion of 'Adikavi' Maharshi Valmiki Jayanti who created the first epic poet of India 'Ramayana', 06/10/2025
ಭಾರತದ ಮೊಟ್ಟಮೊದಲ ಮಹಾಕಾವ್ಯ 'ರಾಮಾಯಣ'ವನ್ನು ರಚಿಸಿದ 'ಆದಿಕವಿ' ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.

Participated in the first meeting of the 2025 Karnataka Land Revenue Second Amendment Obedience Committee regarding Kodagu district chaired by Revenue Minister Shri Krishna Bhairegowda and presented the guidelines regarding Jamma Bane land in Kodagu distr, 06/10/2025
ಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊಡಗು ಜಿಲ್ಲೆಗೆ ಸಂಬಂಧಿಸಿದ 2025ನೇ ಸಾಲಿನ ಕರ್ನಾಟಕ ಭೂ ಕಂದಾಯ ಎರಡನೇ ತಿದ್ದುಪಡಿ ವಿಧೇಯಕ ಪರಿಶೀಲನಾ ಸಮಿತಿಯ ಮೊದಲ ಸಭೆಯಲ್ಲಿ ಭಾಗವಹಿಸಿ ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದಂತೆ ವಿವರಣೆ ನೀಡಿ ಮಾರ್ಗೋಪಾಯ ಅಭಿಪ್ರಾಯಗಳನ್ನು ಮಂಡಿಸಲಾಯಿತು.

Participated in the birthday celebration of Chandanavana star couple Bhuvan and Harshika Poonacha along with my Mrs. Kanchan Ponnanna and wishing the child a bright future, 06/10/2025
ಚಂದನವನದ ತಾರಾ ದಂಪತಿಗಳಾದ ಭುವನ್ ಹಾಗೂ ಹರ್ಷಿಕ ಪೂಣಚ್ಚ ರವರ ಮಗುವಿನ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ನನ್ನ ಶ್ರೀಮತಿ ಕಾಂಚನ್ ಪೊನ್ನಣ್ಣ ರವರ ಜೊತೆಯಲ್ಲಿ ಭಾಗವಹಿಸಿ ಮಗುವಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದೆ.

Kodagu district, Kushalanagar Taluk Kodava Samaj participated as chief guest and wished good luck., 05/10/2025
ಕೊಡಗು ಜಿಲ್ಲೆ, ಕುಶಾಲನಗರ ತಾಲೂಕು ಕೊಡವ ಸಮಾಜದವರು ಆಯೋಜಿಸಿದ ಕೈಲ್ ಪೋಳ್ದ್ ಸಂತೋಷಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಕೋರಲಾಯಿತು.
