Hearty congratulations to Congress party candidates Honorable Shri Mallikarjuna Kharge, Shri Mansoor Ali Khan, Shri Pawan Khera for being elected unopposed to Rajya Sabha from Karnataka., 13/06/2026
ಕರ್ನಾಟಕದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ, ಶ್ರೀ ಮನ್ಸೂರ್ ಅಲಿಖಾನ್, ಶ್ರೀ ಪವನ್ ಖೇರಾ ಅವರಿಗೆ ಹಾರ್ದಿಕ ಅಭಿನಂದನೆಗಳು.

The construction work of a well-equipped government hospital which was long demanded by the people of the constituency and Virajpet is in full swing, as part of the 400 bed upper class hospital demanded to the government, the 250 bed government hospital a, 13/06/2026
ಕ್ಷೇತ್ರದ ಹಾಗೂ ವಿರಾಜಪೇಟೆ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಸುಸಜ್ಜಿತ ಸರಕಾರಿ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಸರಕಾರಕ್ಕೆ ಬೇಡಿಕೆ ಸಲ್ಲಿಸಿದ 400 ಹಾಸಿಗೆಗಳ ಮೇಲ್ದರ್ಜೆ ಆಸ್ಪತ್ರೆಯ ಭಾಗವಾಗಿ, ಸರಕಾರ ಅನುಮೋದಿಸಿದ 250 ಹಾಸಿಗೆಯುಳ್ಳ ಸರಕಾರಿ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದೆ.

As part of the decades of demanding electricity connectivity to the residents of Bommadu Girijan Hadi of Nalkeri Gram Panchayat, Ponnampete Taluk, this work was conducted with a special grant from the government., 11/06/2026
ಪೊನ್ನಂಪೇಟೆ ತಾಲೂಕು ನಾಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮಡು ಗಿರಿಜನ ಹಾಡಿಯ ನಿವಾಸಿಗಳ ದಶಕಗಳ ಬೇಡಿಕೆಯಾದ ವಿದ್ಯುತ್ ಸಂಪರ್ಕ ಕಲ್ಪಿಸುವ ಭಾಗವಾಗಿ, ಸರಕಾರದಿಂದ ವಿಶೇಷ ಅನುದಾನದಲ್ಲಿ ಈ ಕಾರ್ಯವನ್ನು ನೆರವೇರಿಸಲಾಯಿತು.

Kindi dam/bridge construction work in progress connecting Karimbalappu SC colony in Madikeri taluk Karike village panchayat area of Virajpet constituency., 11/06/2026
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಂಬಳಪ್ಪು ಎಸ್ ಸಿ ಕಾಲೋನಿ ಸಂಪರ್ಕಿಸುವ ತೋಡಿಗೆ ಕಿಂಡಿ ಅಣೆಕಟ್ಟು/ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

Barrier construction work to the public road beside Annallamada family's garden of Ponnampete taluk Birunani area of Virajpet assembly constituency has been completed., 10/06/2026
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಬಿರುನಾಣಿ ಭಾಗದ ಅಣ್ಣಳ್ಳಮಾಡ ಕುಟುಂಬಸ್ಥರ ತೋಟ ಪಕ್ಕದ ಸಾರ್ವಜನಿಕ ರಸ್ತೆಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.
