Kodagu Women’s Congress Committee Congratulates Ponnanna, 29/08/2026

ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಪ್ರಮುಖರು ವಿರಾಜಪೇಟೆಯ ಗೃಹ ಕಚೇರಿಯಲ್ಲಿ ನನ್ನನ್ನು ಭೇಟಿಯಾಗಿ, ರಾಜ್ಯ ಸರಕಾರದಲ್ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನನಗೆ ನೀಡಿರುವ ನೂತನ ಜವಾಬ್ದಾರಿಗೆ ಅಭಿನಂದಿಸಿದರಲ್ಲದೆ ಇಂದು ಆಚರಿಸಲ್ಪಡುತ್ತಿರುವ ರಕ್ಷಾಬಂಧನದ ಪ್ರಯುಕ್ತ ರಕ್ಷೆಯನ್ನು ಕಟ್ಟಿ ಶುಭ ಕೋರಿದರು.

 


Narayana Guru Jayanti Greetings to All, 29/08/2026

ಒಂದು ಜಾತಿ, ಒಂದು ಮತ, ಒಂದು ದೇವರು ಎಂಬ ಗುರುಗಳ ವಿಶ್ವಮಾನವ ಸಂದೇಶ ನಮ್ಮ ಜೀವನದೃಷ್ಟಿಯಾಗಲಿ.
ನಾಡಿನ ಸಮಸ್ತ ಬಂಧುಗಳಿಗೆ ನಾರಾಯಣ ಗುರುಗಳ ಜಯಂತಿಯ ಶುಭಾಶಯಗಳು
 

Warm Raksha Bandhan Greetings to All, 29/08/2026

ನಾಡಿನ ಸಮಸ್ತ ಜನತೆಗೆ ಸಹೋದರತ್ವದ ಮೌಲ್ಯಗಳನ್ನು ತಿಳಿಸುವ ಹಾಗೂ ಭ್ರಾತೃತ್ವದ ಬಂಧವನ್ನು ಗಟ್ಟಿಗೊಳಿಸುವ ರಕ್ಷಾ ಬಂಧನ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಹಬ್ಬವು ನಾಡಿನ ಎಲ್ಲ ಸಹೋದರ, ಸಹೋದರಿಯರ ನಡುವೆ ಪ್ರೀತಿ, ವಾತ್ಸಲ್ಯ ಹಾಗೂ ಮಮಕಾರವನ್ನು ಹೆಚ್ಚಿಸಲಿ.
 

Kail Muhurtha Greetings to Nalnad People, 29/08/2026

ನಾಲ್ನಾಡ್ ರ ಕೊಡವ ಮಾಜನಕ್ ಕೈಲ್ ‌ಪೊಳ್ದ್ ನಮ್ಮೆರ ನಲ್ಲಾಮೆ.
ನಾಲ್ಕುನಾಡಿನ ಜನತೆಗೆ ಕೈಲ್ ಮುಹೂರ್ತ ಹಬ್ಬದ ಶುಭಾಶಯಗಳು.
 

Tribute to Late K. Subbaiah on His 7th Death Anniversary, 29/08/2026

ನನ್ನ ಪೂಜನೀಯ ತಂದೆಯವರಾದ ದಿವಂಗತ ಅಜ್ಜಿಕುಟ್ಟಿರ ಕೆ. ಸುಬ್ಬಯ್ಯ ರವರ 7ನೇ ಪುಣ್ಯ ಸ್ಮರಣೆ ದಿನದಂದು ಅವರಿಗೆ ಗೌರವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆ.
ಬಳಿಕ ನನ್ನ ಪೂಜನೀಯ ತಾಯಿಯವರಾದ ಪೊನ್ನಮ್ಮ ಸುಬ್ಬಯ್ಯ ಅವರ ಸಮಾಧಿಗೂ ಪುಷ್ಪ ನಮನ ಸಲ್ಲಿಸಿ ವಂದಿಸಿದೆ.