Participated in the Mahasabha and felicitation program organized by the Virajpet branch of Government Employees Association and greeted., 06/01/2026
ಸರ್ಕಾರಿ ನೌಕರರ ಸಂಘದ ವಿರಾಜಪೇಟೆ ಶಾಖೆಯವರು ಆಯೋಜಿಸಿದ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

The work of sports training centre which is going to start in V.Badaga was observed, 06/01/2026
ವಿ.ಬಾಡಗದಲ್ಲಿ ಪ್ರಾರಂಭವಾಗಲಿರುವ ಕ್ರೀಡಾ ತರಬೇತಿ ಕೇಂದ್ರದ ಕಾಮಗಾರಿಯನ್ನು ವೀಕ್ಷಿಸಲಾಯಿತು.

Coffee harvesting program for journalists was launched at Cheranda Jagan's coffee garden in cooperation with Kodagu district busy journalists association and Virajpet Taluk busy journalists association, 04/01/2026
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರಿಗಾಗಿ ಕಾಫಿ ಕುಯ್ಲು ಕಾರ್ಯಕ್ರಮಕ್ಕೆ ಚೇರಂಡ ಜಗನ್ ಅವರ ಕಾಫಿ ತೋಟದಲ್ಲಿ ಚಾಲನೆ ನೀಡಲಾಯಿತು.

Today at Virajpet Home Office, meeting with officers and inspected the progress of the department, 03/01/2026
ಇಂದು ವಿರಾಜಪೇಟೆಯ ಗೃಹ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಲಾಯಿತು.

Welcomed Bindu Mani, who has been appointed as the new senior police officer of Kodagu district to the district and wish him best law and order, 03/01/2026
ಕೊಡಗು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಬಿಂದು ಮಣಿ ರವರನ್ನು ಜಿಲ್ಲೆಗೆ ಸ್ವಾಗತಿಸಿ ಅತ್ಯುತ್ತಮ ಕಾನೂನು ಮತ್ತು ಸುವ್ಯವಸ್ಥೆ ನೀಡಲಿ ಎಂದು ಶುಭ ಕೋರಲಾಯಿತು.
