Participated in the Silver Jubilee program of Titimati Lamps Academy of Ponnampete Taluk of Virajapete Legislative Assembly constituency and wished the students. To encourage this poor student named Mokshita scored a maximum marks in SSLC exam, my charita, 03/01/2026
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ತಿತಿಮತಿ ಲ್ಯಾಂಪ್ಸ್ ಅಕಾಡೆಮಿ ಸಂಸ್ಥೆಯ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದೆ.
ಈ ಶಾಲೆಯ ಮೋಕ್ಷಿತ ಎಂಬ ಬಡ ವಿದ್ಯಾರ್ಥಿನಿ SSLC ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ್ದನ್ನು ಪ್ರೋತ್ಸಾಹಿಸಲು, ನನ್ನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಕೆಯ ಮುಂದಿನ ವಿದ್ಯಾಭ್ಯಾಸಕ್ಕೆ ಆಕೆಗೆ ವಿದ್ಯಾರ್ಥಿ ವೇತನ ಘೋಷಿಸಿದೆ.

The Mysore Coffee Processing Co-operative Association, request for 3 acres 34 gunts of land and ₹ 3 crore grant was submitted to Honorable Chief Minister today, 03/01/2026
ದಿ ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘಕ್ಕೆ, 3 ಎಕರೆ 34 ಗುಂಟೆ ಜಮೀನು ಹಾಗೂ ₹ 3 ಕೋಟಿ ಅನುದಾನದ ಬೇಡಿಕೆಯ ಮನವಿಯನ್ನು ಇಂದು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

Players participated in the award distribution ceremony of IPL T-10 cricket tournament organized at St. Annamma school ground, Virajpet., 03/01/2026
ವಿರಾಜಪೇಟೆಯ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ಆಯೋಜನೆಗೊಂಡ, ಐಪಿಎಲ್ ಟಿ-10 ಕ್ರಿಕೆಟ್ ಪಂದ್ಯಾಟದ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಟಗಾರರಿಗೆ ಶುಭ ಕೋರಲಾಯಿತು.

First year Mullengada Cup Giving Logo (Launch) was released and wished at Mullengada Ain house in Virajpet Taluk Kandangala, Virajpet assembly constituency, 03/01/2026
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕು ಕಂಡಂಗಾಲದಲ್ಲಿರುವ ಮುಲ್ಲೇಂಗಡ ಐನ್ ಮನೆಯಲ್ಲಿ ಪ್ರಥಮ ವರ್ಷದ ಮುಲ್ಲೇಂಗಡ ಕಪ್ ಕೊಡವ ಕೌಟುಂಬಿಕ ಕಬಡ್ಡಿ ಪಂದ್ಯಾವಳಿಯ ಲೋಗೋ (ಲಾಂಛನ) ಬಿಡುಗಡೆಗೊಳಿಸಿ ಶುಭ ಕೋರಲಾಯಿತು.

Participated in Christmas and New Year's Program organized by South Kodagu Christian Association at St. Anthony Temple of Virajpet Taluk Amati Village, Virajpet Legislative Assembly Constituency, 03/01/2026
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕು ಅಮ್ಮತಿ ಗ್ರಾಮದ ಸಂತ ಆಂತೋಣಿ ದೇವಾಲಯದಲ್ಲಿ ದಕ್ಷಿಣ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ರವರು ಆಯೋಜಿಸಿದ, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
