Answering Media Questions on Cabinet Expansion, 09/08/2026

ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ ಸಂದರ್ಭ.

 


AICC Observers and Nadapuram MLA Felicitate Me in Kodagu, 09/08/2026

ಎಐಸಿಸಿ ವೀಕ್ಷಕರು ಹಾಗೂ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ನಾದಾಪುರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಭಿಜಿತ್ ರವರು ಸಂಘಟನಾ ಸನ್ಮಾನ ಕಾರ್ಯಕ್ರಮ ಪ್ರಯುಕ್ತ ಕೊಡಗಿಗೆ ಆಗಮಿಸಿದ ಸಂದರ್ಭ, ನನ್ನನ್ನು ಆತ್ಮೀಯವಾಗಿ ಸನ್ಮಾನಿಸಿದ ಕ್ಷಣ.


Minister Nagendra’s Allegations Are Politically Motivated, 09/08/2026

ಸಚಿವ ನಾಗೇಂದ್ರರವರ ಮೇಲಿನ ಆರೋಪ ರಾಜಕೀಯ ಪ್ರೇರಿತ. ವಿಶೇಷ ತನಿಖಾದಳ ಸಂಪೂರ್ಣ ತನಿಖೆ ಮಾಡಿ ವರದಿಯನ್ನು ನೀಡಿದ್ದರೂ, ವಿರೋಧ ಪಕ್ಷಗಳ ಆರೋಪ ಕೇವಲ ರಾಜಕೀಯ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಂದರ್ಭ.

 


KPCC President B.K. Hariprasad Visits Home, Discusses Current Political Issues, 09/08/2026

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಬಿಕೆ ಹರಿಪ್ರಸಾದ್ ರವರು ನನ್ನ ಮನೆಗೆ ಸೌಹಾರ್ದ ಭೇಟಿ ನೀಡಿದರು.
ಸನ್ಮಾನ್ಯ ಕೆಪಿಸಿಸಿ ಅಧ್ಯಕ್ಷರನ್ನು ಆತ್ಮೀಯವಾಗಿ ಬರಮಾಡಿಕೊಂಡ ಬಳಿಕ ಪ್ರಸಕ್ತ ರಾಜಕೀಯ ವಿಷಯಗಳ ಬಗ್ಗೆ ನನ್ನೊಂದಿಗೆ ಚರ್ಚಿಸಿದರು.
 

Unscientific SIR Process Threatens Democracy, 09/08/2026

ಎಸ್ಐಆರ್ ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು, ಹಲವು ಲೋಪ ದೋಷಗಳಿಂದ ಕೂಡಿದೆ. ಈ ಅವೈಜ್ಞಾನಿಕ ಪ್ರಕ್ರಿಯೆಯಿಂದಾಗಿ ಈ ಕಾರ್ಯಕ್ರಮವು ವಿಫಲವಾಗುತ್ತದೆ. ಪ್ರಕ್ರಿಯೆ ವಿಫಲವಾದರೆ ಪ್ರಜಾಪ್ರಭುತ್ವ ವಿಫಲವಾದಂತೆ. ಪ್ರಜಾಪ್ರಭುತ್ವ ವಿಫಲವಾದರೆ ಸಂಪೂರ್ಣ ಆಡಳಿತ ವ್ಯವಸ್ಥೆಯೇ ವಿಫಲವಾಗಬಹುದು. ಇದು ದೇಶ ಹಾಗೂ ದೇಶದ ಜನರ ಭವಿಷ್ಯಕ್ಕೆ ಮಾರಕ. ಇಂತಹ ಗಂಭೀರ ವಿಷಯದಲ್ಲಿ ಚುನಾವಣೆ ಆಯೋಗ ಮತ್ತು ಸರಕಾರಗಳು ಪ್ರಯೋಗಕ್ಕೆ ಮಾರುಹೋಗದೆ ಒಂದು ತಾರ್ಕಿಕ ನಿರ್ಧಾರಕ್ಕೆ ಬರಬೇಕಾಗಿರುವುದು ಅವಶ್ಯಕ ಎಂದು ಮಾಧ್ಯಮದ ಪ್ರಶ್ನೆಗೆ ಅಭಿಪ್ರಾಯ ವ್ಯಕ್ತಪಡಿಸಿದ ಸಂದರ್ಭ.