Committed to Fulfilling Any Responsibility Assigned by Congress, 09/08/2026
ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ನಾಯಕತ್ವ ನನಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೂ, ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂದರ್ಭ.

Birthday Wishes to Senior Leader Dr. G. Parameshwar, 09/08/2026

Ponnampete-Kanur Road Named After Freedom Fighter Dheera Kodengada, 09/08/2026
ಪೊನ್ನಂಪೇಟೆ-ಕಾನೂರು ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಧೀರ ಕೋದೆಂಗಡ ಜಿ. ಕಾರ್ಯಪ್ಪ ರವರ ಹೆಸರನ್ನು ನಾಮಕರಣ ಮಾಡಲು ಸರಕಾರಕ್ಕೆ ಶಿಫಾರಸ್ಸು ಮಾಡಿ ಅದನ್ನು ನನಸಾಗಿಸಿದ ಸಂಭ್ರಮವನ್ನು ಹಂಚಿಕೊಳ್ಳಲು, ಕಿಗ್ಗಟ್ಟ್ ನಾಡ್ ಹಿರಿಯ ನಾಗರಿಕ ವೇದಿಕೆಯ ಪ್ರಮುಖರು ನನ್ನನ್ನು ಭೇಟಿಯಾಗಿ ಸನ್ಮಾನಿಸಿದ ಸಂದರ್ಭ.
Botolanda–Kalianda Road Open to Public, 04/08/2026
ಮಡಿಕೇರಿ ತಾಲೂಕು ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದ ಬೋಟೋಳಂಡ, ಹಾಗೂ ಕಲಿಯಂಡ ಕುಟುಂಬಸ್ಥರ ಮನೆಗೆ ಹೋಗುವ ಮುಖ್ಯ ರಸ್ತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ.

Birthday Wishes to Former CM Siddaramaiah, 04/08/2026
ಕರ್ನಾಟಕ ರಾಜ್ಯವನ್ನು ಅತ್ಯಧಿಕ ಕಾಲ ಆಳಿದ ಹೆಗ್ಗಳಿಕೆ ಹೊತ್ತ ಮೇರು ರಾಜಕಾರಣಿ, ಸಮಾಜದ ಎಲ್ಲಾ ವರ್ಗದ ಜನತೆಗೆ ಸಾಮಾಜಿಕ ನ್ಯಾಯದ ಕಲ್ಪನೆಯ ಚಿಂತಕ, ಪಂಚ ಗ್ಯಾರೆಂಟಿ ಯೋಜನೆಗಳ ಅದ್ಭುತ ಯಶಸ್ಸಿನ ರೂವಾರಿ, ಶ್ರೇಷ್ಠ ಆರ್ಥಿಕ ತಜ್ಞ, ದೀನದಲಿತರ, ಬಡವ ಬಲ್ಲಿದರ ಆಶಾಕಿರಣ, ಅಪಾರ ಜನಮನ್ನಣೆಯುಳ್ಳ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
