World Tribal Day Health Checkup and Blood Donation Camp Held at Balugodu, 26/08/2026
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ ಮಡಿಕೇರಿ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಸಂಸ್ಕೃತಿ ಸಿಹಿ ಟ್ರಸ್ಟ್ ಕೊಡಗು, ಇವರ ಜಂಟಿ ಸಹಯೋಗದೊಂದಿಗೆ ವಿಶ್ವ ಬುಡಕಟ್ಟು ದಿನಾಚರಣೆಯ ಹಾಗೂ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಬಾಳುಗೋಡುವಿನ ಏಕಲವ್ಯ ಮಾದರಿ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರುತ್ತಾ ವಿಶ್ವ ಬುಡಕಟ್ಟು ದಿನಾಚರಣೆಯ ಅಂಗವಾಗಿ ಈ ಒಂದು ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅತ್ಯಂತ ಸಮಯೋಚಿತವಾಗಿದೆ. ನಾಡಿನ ಸಂಸ್ಕೃತಿಯನ್ನು ಕಾಪಾಡುವಂತಹ ಬುಡಕಟ್ಟು ಜನಾಂಗದವರ ಏಳಿಗೆಗಾಗಿ ಶ್ರಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ದಿನದಂದು ಬುಡಕಟ್ಟು ಜನರ ಮಧ್ಯೆ ಆರೋಗ್ಯ ತಪಾಸಣೆ ಶಿಬಿರವನ್ನು ಮಾಡುವುದು ಹಾಗೂ ರಕ್ತದಾನದಂತಹ ಉನ್ನತ ಕಾರ್ಯದ ಬಗ್ಗೆ ಮಾಹಿತಿ ಒದಗಿಸಿ ಅವರನ್ನು ಒಳಗೊಡಿಸುವುದು ಪುಣ್ಯಕಾರ್ಯವಾಗಿದೆ.ಇದೇ ರೀತಿಯ ಕಾರ್ಯಕ್ರಮಗಳು ಕ್ಷೇತ್ರದ ಇನ್ನಿತರ ಕಡೆಯೂ ಬುಡಕಟ್ಟು ನಿವಾಸಿಗಳು ಇರುವಂತಹ ಜಾಗದಲ್ಲಿ ಮಾಡುವುದು ಉತ್ತಮ ಎಂದು ಸಲಹೆ ನೀಡಿದ ಮಾನ್ಯ ಶಾಸಕರು, ಬುಡಕಟ್ಟು ಜನಾಂಗದವರಲ್ಲಿ ಅನೇಕ ಜನರು ಉನ್ನತ ಶಿಕ್ಷಣ ಮಾಡಿ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಇಂತಹವರನ್ನು ಮಾದರಿಯಾಗಿ ತಕೊಂಡು ಎಲ್ಲರೂ ಸಮಾಜದಲ್ಲಿ ಮುನ್ನಡೆಗೆ ಬರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.

CM DK Shivakumar Meets Former Cricketer Robin Uthappa, 26/08/2026
ಮಾಜಿ ಕ್ರಿಕೆಟ್ ಪಟು ಹಾಗೂ ಕೊಡಗಿನ ಶ್ರೀ ರಾಬಿನ್ ಉತ್ತಪ್ಪನವರನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರೊಂದಿಗೆ ಭೇಟಿ ಮಾಡಿಸಿದ ಸಂದರ್ಭ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ತನಗೆ ಬಿಡಿಎ ನಿವೇಶನ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದಲಾಯಿತು.

Dignitaries Briefed on Development Works in Virajpet, 26/08/2026
ವಿರಾಜಪೇಟೆ ಕ್ಷೇತ್ರದಲ್ಲಿ ಕೈಗೊಂಡಿರುವ ಕೆಲಸಗಳನ್ನು ಜನಸಾಮಾನ್ಯರಿಗೆ ತಿಳಿಸುವ "ವಾಗ್ದಾನ-ಅನುಷ್ಠಾನ" ಪುಸ್ತಕವನ್ನು ಕುತೂಹಲದಿಂದ ವೀಕ್ಷಿಸುತ್ತಾ ಮೆಚ್ಚುಗೆ ವ್ಯಕ್ತಪಡಿಸಿದ, ಕರ್ನಾಟಕ ರಾಜ್ಯ ಘನ ಸರಕಾರದ ಮಾನ್ಯ ಉಪಮುಖ್ಯಮಂತ್ರಿ ಶ್ರೀ ಡಾ ಜಿ ಪರಮೇಶ್ವರ ಅವರು ಹಾಗೂ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು.

Public and Party Workers Congratulate MLA on New Appointment, 26/08/2026
ಪೊನ್ನಂಪೇಟೆಯ ಶಾಸಕರ ಅಧಿಕೃತ ಕಚೇರಿಯಲ್ಲಿ ಸಾರ್ವಜನಿಕರನ್ನು ಹಾಗೂ ಕಾರ್ಯಕರ್ತರನ್ನು ಭೇಟಿಯಾದ ಸಂದರ್ಭ, ನೂತನವಾಗಿ ನನಗೆ ದೊರಕಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಸಾರ್ವಜನಿಕರು ನನ್ನನ್ನು ಅಭಿನಂದಿಸಿದರು.
ಹಾಗೂ ಸಾರ್ವಜನಿಕರಿಂದ ಹವಾಲುಗಳನ್ನು ಸ್ವೀಕರಿಸಿ ಸಂದರ್ಭ.

I cannot stay silent when my personal matters are dragged into politics., 26/08/2026
ರಾಜಕೀಯಕ್ಕೆ ನನ್ನ ವೈಯಕ್ತಿಕ ವಿಷಯವನ್ನು ಎಳೆದು ತಂದರೆ ಸುಮ್ಮನೆ ಇರಲು ಸಾಧ್ಯವಿಲ್ಲ.
